Saturday, November 29, 2025

 






ಗಾಳಿಗಂಟೆಯಲಿ ತೂರಿಬಂದ ಸವಿನಾದ,

ಮನದ ತಂತಿಯಲಿ ಮೂಡಿಸಿದೆ ಅನುರಾಗ ||

ನೀಲಿಪಟ ಆಕಾಶದ ಹಿನ್ನೆಲೆಯಲಿ,

ಬೆತ್ತಲೆ ಮರ ಬರೆದಿದೆ ಮೌನದ ಕವನ

ಕೊಂಬೆಯ ಶೂನ್ಯತೆ ಉಸಿರಾಗಿ ಹರಿಯೆ

ಗಂಟೆಯ ನಾದದೊಳು ಜೀವದ ಪ್ರತಿಧ್ವನಿ

ಎದೆಯೊಳಗೆ ಅರಿಯೆ ನಾ ಹೇಳಲಾಗದ ನೆಮ್ಮದಿ ||

No comments:

Post a Comment